ಮಂಗಳೂರು : ಧರ್ಮಸ್ಥಳ ಕ್ಷೇತ್ರದ ಮೇಲೆ ಸ್ಥಾಪಿತ ಹಿತಾಶಕ್ತಿಗಳು ಅಪಪ್ರಚಾರ ಮಾಡುತ್ತಿರುವುದು ತೀವ್ರವಾಗಿ ತಿರಸ್ಕರಿಸಲಾಗಿದೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ನಿಖರವಾದ ತನಿಖೆಗಳು ನಡೆಯುತ್ತಿರುವಾಗ, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಕೊಲೆಯಾಗಿರಬಹುದು, ಆದರೆ ನೂರಾರು ಕೊಲೆಯಾಗಿದ್ದಲ್ಲಿ ನ್ಯಾಯ ವ್ಯವಸ್ಥೆ ಪೋಲೀಸರು ಇದ್ದಾರೆ, ಕೋರ್ಟುಗಳಿವೆ, ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗು ರಾಜ್ಯದ ಮುಖ್ಯ ಮಂತ್ರಿಗಳಿದ್ದಾರೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ನುಡಿದರು.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆ. 16 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸೌಜನ್ಯ ಕೊಲೆಯಂತಹ ಪ್ರಕರಣಗಳು ನ್ಯಾಯಾಲಯದ ತನಿಖೆಗೆ ಒಳಪಟ್ಟಿವೆ. ಆದರೆ ಅದನ್ನೇ ಪುನ: ಪುನ: ಸಾರ್ವಜನಿಕರ ಮುಂದೆ ತಾರದೆ ನಾನು ಹೋರಾಟಗಾರರಿಗೆಲ್ಲ ಕೈಮುಗಿದು ವಿನಂತಿಸುದ್ದೇನೆಂದರೆ ನ್ಯಾಯಾಲಯವಿದೆ, ಕಾನೂನಿನ ಮೂಲಕ ಹೋರಾಟ ಮಾಡಿ. ಉಚ್ಚ ನ್ಯಾಯಾಲಯ, ಅಂತರಾಷ್ಟ್ರೀಯ ಮಟ್ಟದಲ್ಲೂ ನ್ಯಾಯಾಲಯವಿದೆ (International Court for Justice London / Netherland). ಇದನ್ನು ಸಂಪರ್ಕಿಸಬಹುದು. ಜನಸಾಮಾನ್ಯರನ್ನು ತಪ್ಪು ಹಾದಿಯತ್ತ ಕೊಂಡೊಯ್ಯುವುದು ಸರಿಯಲ್ಲ.
ಯಾವುದೇ ಧರ್ಮವಿರಲಿ, ಅವರವರು ಅವರವರ ಧರ್ಮವನ್ನು ರಕ್ಷಣೆ ಮಾಡಲೇ ಬೇಕು. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯವರಲ್ಲಿ ಒಂದೇ ಪ್ರಾರ್ಥನೆ ನಾವು ನಮ್ಮ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮೂಲಕ ಕಳೆದ 25 ವರ್ಷಗಳಿಂದ ಸತ್ಯದ ಹೋರಾಟ ಮಾಡುತ್ತಾ ಬಂದಿದ್ದು ಯಶಸ್ಸಿ ಕಂಡಿದ್ದೇವೆ. ಅದೇ ರೀತಿ ಜನಸಾಮಾನ್ಯರ ಈ ಸಮಸ್ಯೆಗೆ ನಾವೆಲ್ಲರೂ ಕೈಜೋಡಿಸೋಣ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಮಿತಿಯ ರಾಜ್ಯ ಸಂಚಾಲಕರಾದ ಕೆ. ಪಿ. ಜಗದೀಶ್ ಅಧಿಕಾರಿಯವರು ತನ್ನ ಅಭಿಪ್ರಾಯವನ್ನು ಪತ್ರಕರ್ತರ ಮುಂದಿಟ್ಟರು. ಸಮಿತಿಯ ಸದಸ್ಯ ಶಂಕರ್ ಸುವರ್ಣರೂ ಉಪಸ್ಥಿತರಿದ್ದರು.
(Content Courtesy : megamedianews.com and udupinewsplus.com)
https://kannada.megamedianews.com/archives/5327
https://udupinewsplus.com/?p=13369